Mahitiloka.com-Telegram-Channel
mahitiloka-whatsapp-group-links

ಬಾಗಲಕೋಟೆ ಡಿಸಿಸಿ ಬ್ಯಾಂಕ್‌ ನೇಮಕಾತಿ 2022 – Bagalkot DCC Bank Recruitment 2022

Bagalkot DCC Bank Recruitment 2022: ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತದಲ್ಲಿ ಖಾಲಿ ಇರುವ ಒಟ್ಟು 110 ಹುದ್ದೆಗಳಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಆನ್ ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು.

Bagalkot DCC Bank Recruitment 2022 ಸಂಕ್ಷಿಪ್ತ ಮಾಹಿತಿ

ಇಲಾಖೆ ಅಥವಾ ನೇಮಕಾತಿ ಪ್ರಾಧಿಕಾರದ ಹೆಸರುBagalkot DCC Bank
ಹುದ್ದೆಗಳ ಹೆಸರುಸಾಫ್ಟ್‌ವೇರ್ ಇಂಜಿನಿಯರ್,
ಸಿವಿಲ್ ಇಂಜಿನಿಯರ್,
ಗಣಕಯಂತ್ರ ಸಂಯೋಜಕರು,
ಪ್ರಥಮ ದರ್ಜೆ ಸಹಾಯಕರು (‌FDA),
ದ್ವಿತೀಯ ದರ್ಜೆ ಸಹಾಯಕರು (SDA),
ಸಿಪಾಯಿ,
ವಾಹನ ಚಾಲಕ
ಒಟ್ಟು ಹುದ್ದೆಗಳು 110
ವೇತನಅಧಿಸೂಚನೆಯಲ್ಲಿರುವಂತೆ
ಅರ್ಜಿ ಸಲ್ಲಿಕೆ ಆನ್ ಲೈನ್ (Online)
ಅರ್ಜಿ ಸಲ್ಲಿಕೆ ಆರಂಭ11-03-2022

Bagalkot DCC Bank Recruitment 2022 ಹುದ್ದೆಗಳ ವಿವರ

ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆ
ಸಾಫ್ಟ್‌ವೇರ್ ಇಂಜಿನಿಯರ್ (Software Engineer)1
ಸಿವಿಲ್ ಇಂಜಿನಿಯರ್ (Civil Engineer)1
ಗಣಕಯಂತ್ರ ಸಂಯೋಜಕರು (Computer Coordinator)2
ಪ್ರಥಮ ದರ್ಜೆ ಸಹಾಯಕರು (First Division Assistant)20
ದ್ವಿತೀಯ ದರ್ಜೆ ಸಹಾಯಕರು (Second Division Assistant)30
ಸಿಪಾಯಿ (Sepoy)54
ವಾಹನ ಚಾಲಕ (Vehicle Driver)2

Bagalkot DCC Bank Recruitment 2022 ವೇತನ ಶ್ರೇಣಿ ವಿವರ

ಹುದ್ದೆಗಳು ವೇತನ
ಸಾಫ್ಟ್‌ವೇರ್ ಇಂಜಿನಿಯರ್ (Software Engineer)Rs.40900-78200/-
ಸಿವಿಲ್ ಇಂಜಿನಿಯರ್ (Civil Engineer)Rs.40900-78200/-
ಗಣಕಯಂತ್ರ ಸಂಯೋಜಕರು (Computer Coordinator)Rs.37900-70850/-
ಪ್ರಥಮ ದರ್ಜೆ ಸಹಾಯಕರು (First Division Assistant)Rs.37900-70850/-
ದ್ವಿತೀಯ ದರ್ಜೆ ಸಹಾಯಕರು (Second Division Assistant)Rs.33450-62600/-
ಸಿಪಾಯಿ (Sepoy)Rs.27650-52650/-
ವಾಹನ ಚಾಲಕ (Vehicle Driver)Rs.27650-52650/-

Bagalkot DCC Bank Recruitment 2022 ವಿದ್ಯಾರ್ಹತೆ

ಹುದ್ದೆಗಳು ವಿದ್ಯಾರ್ಹತೆ
ಸಾಫ್ಟ್‌ವೇರ್ ಇಂಜಿನಿಯರ್ (Software Engineer)ಅಂಗೀಕೃತ ಎ.ಐ.ಸಿ.ಟಿ.ಇ ನಿಂದ ಪಡೆದ ಬಿ.ಇ.(ಗಣಕ ವಿಜ್ಞಾನ) ಪದವಿ, ಬಿಸಿಎ ಇವುಗಳಲ್ಲಿ ಪರಿಶಿಷ್ಟ ಪಂಗಡದ ಅಭ್ಯರ್ಥಿ ಕನಿಷ್ಠ 55% ಅಂಕ ಪಡೆದಿರಬೇಕು. ಬ್ಯಾಂಕಿಂಗ್‌ ಸಿಬಿಎಸ್ ತಂತ್ರಾಂಶಕ್ಕೆ ಸಂಬಂಧಿಸಿದ ಕನಿಷ್ಠ 5 ವರ್ಷ ತಾಂತ್ರಿಕ ಸಲಹೆಗಾರರಾಗಿ ಸಂಸ್ಥೆಯ ಅನುಭವ ಹೊಂದಿರಬೇಕು ಹಾಗೂ ಜಾವಾ ಭಾಷೆ ಮತ್ತು ಒರ‍್ಯಾಕಲ್ ಜ್ಞಾನ ಹೊಂದಿರಬೇಕು.
ಸಿವಿಲ್ ಇಂಜಿನಿಯರ್ (Civil Engineer)ಅಂಗೀಕೃತ ಎ.ಐ.ಸಿ.ಟಿ.ಇ ನಿಂದ ಪಡೆದ ಬಿ.ಇ (ಸಿವಿಲ್) ದಲ್ಲಿ ಕನಿಷ್ಠ ಶೇ. 60
ಅಂಕಗಳೊಂದಿಗೆ ಪದವಿ ಪಡೆದಿರಬೇಕು. ಹಾಗೂ ಕನಿಷ್ಠ 5 ವರ್ಷ ತಾಂತ್ರಿಕ ಸಲಹೆಗಾರರಾಗಿ ಸಂಸ್ಥೆಯ ಹೊಂದಿರಬೇಕು.
ಗಣಕಯಂತ್ರ ಸಂಯೋಜಕರು (Computer Coordinator)ಅಂಗೀಕೃತ ಎ.ಐ.ಸಿ.ಟಿ.ಇ ನಿಂದ ಪಡೆದ ಪದವಿ ಬಿ.ಇ/ಬಿ.ಟೆಕ್, ಕಂಪ್ಯೂಟರ ಸೈನ್ಸ್ / ಇಲೆಕ್ಟ್ರಾನಿಕ್ಸ್ & ಕಮುನಿಕೇಶನ್, ಬಿ.ಸಿ.ಎ, ಬಿಎಸ್ಸಿ (ಕಂಪ್ಯೂಟರ ಸೈನ್ಸ್) ನಲ್ಲಿ ಕನಿಷ್ಟ ಶೇ. 60% ಅಂಕಗಳೊಂದಿಗೆ ಪದವಿ ಪಡೆದಿರಬೇಕು, ಹಾಗೂ ಕನಿಷ್ಟ 5 ವರ್ಷ ಗಣಕಯಂತ್ರ ಸಂಯೋಜಕರಾಗಿ ಸಂಸ್ಥೆಯ ಅನುಭವ ಹೊಂದಿರಬೇಕು.
ಪ್ರಥಮ ದರ್ಜೆ ಸಹಾಯಕರು (First Division Assistant)ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದ ಯಾವುದೇ ಪದವಿಯಲ್ಲಿ ತೆರ್ಗಡೆಯಾಗಿರಬೇಕು, ಮತ್ತು ಕನಿಷ್ಠ ಶೇ 55% ಅಂಕಗಳನ್ನು ಪಡೆದಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳು ಕನಿಷ್ಠ 50 % ಅಂಕಗಳನ್ನು ಪಡೆದಿರಬೇಕು. ಕನ್ನಡವನ್ನು ಓದುವ ಸಾಮರ್ಥ್ಯದ ಜೊತೆ ಕನ್ನಡ ಜ್ಞಾನ, ಬರೆಯುವಿಕೆ, ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಬೇಕು ಮತ್ತು ಅರ್ಥ ಮಾಡಿಕೊಳ್ಳಬೇಕು. ಕಂಪ್ಯೂಟರ್ ಆಪರೇಶನ್ ಮತ್ತು ಅಪ್ಲಿಕೇಶನ ಜ್ಞಾನ ಹೊಂದಿರಬೇಕು.
ದ್ವಿತೀಯ ದರ್ಜೆ ಸಹಾಯಕರು (Second Division Assistant)ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯ ಯಾವದೇ ಪದವಿಯಲ್ಲಿ ತೆರ್ಗೆಡೆಯಾಗಿರಬೇಕು, ಮತ್ತು ಕನಿಷ್ಟ ಶೇ 55 % ಅಂಕಗಳನ್ನು ಪಡೆದಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳು ಕನಿಷ್ಟ 50 % ಅಂಕಗಳನ್ನು ಪಡೆದಿರಬೇಕು. ಕನ್ನಡವನ್ನು ಓದುವ ಸಾಮರ್ಥ್ಯದ ಜೊತೆ ಕನ್ನಡ ಜ್ಞಾನ, ಬರೆಯುವಿಕೆ, ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಬೇಕು ಮತ್ತು ಅರ್ಥ ಮಾಡಿಕೊಳ್ಳಬೇಕು ಕಂಪ್ಯೂಟರ ಆಪರೇಶನ್ ಮತ್ತು ಅಪ್ಲಿಕೇಶನ ಜ್ಞಾನ ಹೊಂದಿರಬೇಕು.
ಸಿಪಾಯಿ (Sepoy)ಎಸ್.ಎಸ್.ಎಲ್.ಸಿ. ಯಲ್ಲಿ ಉತ್ತೀರ್ಣರಾಗಿರಬೇಕು ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು.
ವಾಹನ ಚಾಲಕ (Vehicle Driver)ಎಸ್.ಎಸ್.ಎಲ್.ಸಿ. ಯಲ್ಲಿ ಉತ್ತೀರ್ಣರಾಗಿರಬೇಕು ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು ಹಾಗೂ ಲಘು ವಾಹನ ಚಾಲನೆ ಪರವಾನಿಗೆಯೊಂದಿಗೆ 5 ವರ್ಷ ಅನುಭವ ಹೊಂದಿರಬೇಕು.

ವಯೋಮಿತಿ :

ಕನಿಷ್ಠ 18 ವರ್ಷ. ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಎಸ್ಸಿ ಎಸ್ಟಿ, ಪ್ರವರ್ಗ 1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ 40 ವರ್ಷ, ಇತರ ಹಿಂದುಳಿದ ವರ್ಗಕ್ಕೆ ಗರಿಷ್ಠ 38 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮಾಜಿ ಸೈನಿಕರಿಗೆ ಗರಿಷ್ಠ 45 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕ:

  • ಸಾಮಾನ್ಯ ವರ್ಗ, ಹಿಂದುಳಿದ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ 1000 ರೂ.
  • ಎಸ್ಸಿ, ಎಸ್ಟಿ, ಪ್ರವರ್ಗ 1, ಅಂಗವಿಕಲ, ವಿಧವಾ ಅಭ್ಯರ್ಥಿ ಹಾಗೂ ಮಾಜಿ ಸೈನಿಕರಿಗೆ 500 ರೂ. ಅರ್ಜಿಶುಲ್ಕ ನಿಗದಿಪಡಿಸಿದ್ದು, ಆನ್‌ಲೈನ್ ಮೂಲಕ ಪಾವತಿಸಲು ಸೂಚಿಸಲಾಗಿದೆ.

Bagalkot DCC Bank Recruitment 2022 ರ ಆಯ್ಕೆ ವಿಧಾನ

ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ವಿಧಾನ:

ಆನ್‌ಲೈನ ಮೂಲಕ ಸಲ್ಲಿಸಲಾದ ಅರ್ಜಿಗಳನ್ನು ಹುದ್ದೆಗೆ ನಿಗಧಿಪಡಿಸಿದ ವಿದ್ಯಾರ್ಹತೆ ಹಾಗೂ ಅಗತ್ಯ ದಾಖಲೆಗಳ ಆಧಾರದ ಮೇಲೆ ಪರಿಶೀಲಿಸಿ ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯ ವಿಷಯಗಳ ಹುದ್ದೆವಾರು ವಿವರ ಈ ಕೆಳಗಿನಂತೆ ಇರುತ್ತದೆ.

  • ಸಾಫ್ಟ್‌ವೇರ್/ಸಿವಿಲ್ ಇಂಜನೀಯರ/ಗಣಕಯಂತ್ರ ಸಂಯೋಜಕರ ಹುದ್ದೆಗಳಿಗೆ
    • 200 ಅಂಕಗಳ ಲಿಖಿತ ಪರೀಕ್ಷೆ ಇದ್ದು, ಕನ್ನಡ ಭಾಷೆಗಾಗಿ-50 ಅಂಕಗಳು, ಸಾಮಾನ್ಯ ಇಂಗ್ಲೀಷಗಾಗಿ-25 ಅಂಕಗಳು, ಸಾಮಾನ್ಯ ಜ್ಞಾನಕ್ಕಾಗಿ-25 ಅಂಕಗಳು, ಕಂಪ್ಯೂಟರ್/ ಮಾಹಿತಿ ತಂತ್ರಜ್ಞಾನ/ಬ್ಯಾಂಕಿಂಗ್ ತಂತ್ರಜ್ಞಾನ ಪರೀಕ್ಷೆ-15 ಅಂಕಗಳು ಮತ್ತು ಭಾರತ ಸಂವಿಧಾನಕ್ಕೆ 25 ಅಂಕಗಳನ್ನು ಒಳಗೊಂಡಿರುತ್ತದೆ.
  • ಪ್ರಥಮ/ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ
    • 200 ಅಂಕಗಳ ಲಿಖಿತ ಪರೀಕ್ಷೆ ಇದ್ದು, ಕನ್ನಡ ಭಾಷೆಗಾಗಿ-50 ಅಂಕಗಳು, ಸಾಮಾನ್ಯ ಇಂಗ್ಲೀಷಾಗಿ-25 ಅಂಕಗಳು, ಸಾಮಾನ್ಯ ಜ್ಞಾನಕ್ಕಾಗಿ-25 ಅಂಕಗಳು, ಸಹಕಾರಿ ವಿಷಯಕ್ಕಾಗಿ-50 ಅಂಕಗಳು, ಭಾರತ ಸಂವಿಧಾನಕ್ಕೆ 25 ಅಂಕಗಳು, ಮತ್ತು ವಸ್ತುನಿಷ್ಠ ವಿಷಯಗಳಿಗೆ 25 ಅಂಕಗಳನ್ನು ಒಳಗೊಂಡಿರುತ್ತದೆ.
  • ಸಿಪಾಯಿ ವಾಹನ ಚಾಲಕ ಹುದ್ದೆಗಳಿಗೆ
    • 100 ಅಂಕಗಳ ಲಿಖಿತ ಪರೀಕ್ಷೆ ಇದ್ದು, ಕನ್ನಡ ಭಾಷೆಗಾಗಿ-50 ಅಂಕಗಳು, ಸಾಮಾನ್ಯ ಜ್ಞಾನಕ್ಕಾಗಿ-50 ಅಂಕಗಳನ್ನು ಒಳಗೊಂಡಿರುತ್ತದೆ ಸಂದರ್ಶನ ವೇಳೆಯಲ್ಲಿ ವಾಹನ ಚಾಲಕರಿಗೆ ವಾಹನ ಚಾಲನೆಯ ಪರೀಕ್ಷೆ ನಡೆಸಲಾಗುವದು.

ಈ ಮೇಲಿನ ಎಲ್ಲಾ ಹುದ್ದೆಗಳಿಗೆ ಲಿಖಿತ ಪರೀಕ್ಷೆಯಲ್ಲಿ ಪಡೆಯಲಾದ ಅಂಕಗಳ ಆಧಾರದ ಮೇಲೆ 1:5 ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುವುದು. ಅಭ್ಯರ್ಥಿಯು ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಶೇ. 85ಕ್ಕೆ ಇಳಿಸಿ ಪ್ರಾಪ್ತವಾಗುವ ಅಂಕಗಳ ಜೊತೆಗೆ ಮೌಖಿಕ ಸಂದರ್ಶನಕ್ಕೆ ಗರಿಷ್ಟ 15 ಅಂಕಗಳನ್ನು ನಿಗಧಿಪಡಿಸಿದ್ದು ಸಂದರ್ಶನದಲ್ಲಿ ಗಳಿಸುವ ಅಂಕಗಳು ಮತ್ತು ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಒಟ್ಟುಗೂಡಿಸಿ ಈ ಆಧಾರದ ಮೇಲೆ ಯಶಸ್ವಿ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ತಯಾರಿಸಿ ಅರ್ಹತೆಯ ಆಧಾರದ ಮೇಲೆ ಮಿಸಲಾತಿ ನಿಯಮಗಳನ್ನು ಅನುಸರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳ ಅರ್ಹತೆಯ ಬಗ್ಗೆ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ಣಯವೇ ಅಂತೀಮವಾಗಿರುತ್ತದೆ.

Bagalkot DCC Bank Recruitment 2022 ಯ ಪ್ರಮುಖ ದಿನಾಂಕಗಳು

ಆನ್‌ಲೈನ್‌ ಅರ್ಜಿ ಸ್ವೀಕರಿಸುವ ಪ್ರಾರಂಭ ದಿನಾಂಕ11-03-2022
ಆನ್‌ಲೈನ್‌ ಅರ್ಜಿ ಸ್ವೀಕರಿಸುವ ಕೊನೆ ದಿನಾಂಕ04-04-2022

Bagalkot DCC Bank Recruitment 2022 ಪ್ರಮುಖ ಲಿಂಕ್’ಗಳು

EventsLinks
ಆಫಿಸಿಯಲ್ ನೋಟಿಫಿಕೇಶನ್Download
ಆನ್ ಲೈನ್ ಅಪ್ಲಿಕೇಶನ್ಇಲ್ಲಿ ಕ್ಲಿಕ್ ಮಾಡಿ
ಮಾಹಿತಿಲೋಕ ಹೋಮ್ ಪೆಜ್ಇಲ್ಲಿ ಕ್ಲಿಕ್ ಮಾಡಿ
Bagalkot DCC Bank Recruitment 2022

ಇದೇ ರೀತಿಯ ಉದ್ಯೋಗ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಮ್ ಚಾನೆಲಗೆ Join ಆಗಿ. Join Telegram

Leave a Comment