Mahitiloka.com-Telegram-Channel
mahitiloka-whatsapp-group-links

ಬಳ್ಳಾರಿ ಡಿಸಿಸಿ ಬ್ಯಾಂಕ್‌ ನೇಮಕಾತಿ 2022 – Ballari DCC Bank Recruitment 2022

Ballari DCC Bank Recruitment 2022: ಬಳ್ಳಾರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತ, ಹೊಸಪೇಟೆನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಆನ್ ಲೈನ್ ಅರ್ಜಿ (Online Application) ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು.

Ballari DCC Bank Recruitment 2022 ಸಂಕ್ಷಿಪ್ತ ಮಾಹಿತಿ

ಇಲಾಖೆ ಅಥವಾ ನೇಮಕಾತಿ ಪ್ರಾಧಿಕಾರದ ಹೆಸರುBallari DCC Bank
ಹುದ್ದೆಗಳ ಹೆಸರುಕಂಪ್ಯೂಟರ್ ಇಂಜಿನಿಯರ್,
ಪ್ರಥಮ ದರ್ಜೆ ಸಹಾಯಕರು (‌FDA),
ದ್ವಿತೀಯ ದರ್ಜೆ ಸಹಾಯಕರು (SDA),
ಕಿರಿಯ ಸೇವಕರು,
ವಾಹನ ಚಾಲಕ
ಒಟ್ಟು ಹುದ್ದೆಗಳು 58
ವೇತನಅಧಿಸೂಚನೆಯಲ್ಲಿರುವಂತೆ
ಅರ್ಜಿ ಸಲ್ಲಿಕೆ ಆನ್ ಲೈನ್ (Online)
ಅರ್ಜಿ ಸಲ್ಲಿಕೆ ಆರಂಭ25.03.2022

Ballari DCC Bank Recruitment 2022 ಹುದ್ದೆಗಳ ವಿವರ

ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆ
ಕಂಪ್ಯೂಟರ್ ಇಂಜಿನಿಯರ್ (Computer Engineer)1
ಪ್ರಥಮ ದರ್ಜೆ ಸಹಾಯಕರು (First Division Assistant)1
ದ್ವಿತೀಯ ದರ್ಜೆ ಸಹಾಯಕರು (Second Division Assistant)40
ಕಿರಿಯ ಸೇವಕರು15
ವಾಹನ ಚಾಲಕ (Vehicle Driver)1

Ballari DCC Bank Recruitment 2022 ವೇತನ ಶ್ರೇಣಿ ವಿವರ

ಹುದ್ದೆಗಳು ವೇತನ
ಕಂಪ್ಯೂಟರ್ ಇಂಜಿನಿಯರ್ (Computer Engineer)Rs.33450 – 62600/-
ಪ್ರಥಮ ದರ್ಜೆ ಸಹಾಯಕರು (First Division Assistant)Rs.27650 – 52650/-
ದ್ವಿತೀಯ ದರ್ಜೆ ಸಹಾಯಕರು (Second Division Assistant)Rs.21400 – 42000/-
ಕಿರಿಯ ಸೇವಕರುRs.18600 – 32600/-
ವಾಹನ ಚಾಲಕ (Vehicle Driver)Rs.19950 – 37900/-

Ballari DCC Bank Recruitment 2022 ವಿದ್ಯಾರ್ಹತೆ

ಹುದ್ದೆಗಳು ವಿದ್ಯಾರ್ಹತೆ
ಕಂಪ್ಯೂಟರ್ ಇಂಜಿನಿಯರ್ (Computer Engineer)(1) ಭಾರತದ ಕಾನೂನಿನನ್ವಯ ಸ್ಥಾಪನೆಯಾದ ವಿಶ್ವವಿದ್ಯಾನಿಲಯದಲ್ಲಿ ಕನಿಷ್ಠ ವಿದ್ಯಾರ್ಹತೆಯು ಬಿ.ಇ. ಇನ್ ಕಂಪ್ಯೂಟರ್ ಸೈನ್ಸ್ ಅಥವಾ ಎಂ.ಸಿ.ಎ.ಪರೀಕ್ಷೆಯಲ್ಲಿ ಕನಿಷ್ಠ ಕಂಪ್ಯೂಟರ್ ಶೇಕಡ 60% ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಪರಿಶಿಷ್ಟ ಜಾತಿ/ಪರಿಶಿಷ್ಟ ಇಂಜಿನಿಯರ್ ಪಂಗಡ/ಪ್ರ.ವರ್ಗ-1 ಅಭ್ಯರ್ಥಿಗಳಾಗಿದ್ದಲ್ಲಿ ಶೇಕಡ 50% ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಮತ್ತು ಕನ್ನಡ ಭಾಷಓದಲು ಮತ್ತು ಬರೆಯಲು ಕಡ್ಡಾವಾಗಿ ಬರತಕ್ಕದ್ದು.
ಪ್ರಥಮ ದರ್ಜೆ ಸಹಾಯಕರು (First Division Assistant)1) ಭಾರತದ ಕಾನೂನಿನನ್ವಯ ಸ್ಥಾಪನೆಯಾದ ವಿಶ್ವವಿದ್ಯಾನಿಲಯದ ಯಾವುದೇ ಪದವಿಯಲ್ಲಿ ತೇರ್ಗಡೆಯಾಗಿರಬೇಕು. ಯಾವುದೇ ಪದವಿಯಲ್ಲಿ ಕನಿಷ್ಠ ಶೇಕಡ 60% ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ಅಭ್ಯರ್ಥಿಗಳಾಗಿದ್ದಲ್ಲಿ ಶೇಕಡ 50% ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
2) ಕನ್ನಡವನ್ನು ಓದುವ ಸಾಮರ್ಥ್ಯದ ಜೊತೆ ಕನ್ನಡದ ಜ್ಞಾನ, ಬರೆಯುವಿಕೆ, ಕನ್ನಡವನ್ನು ಸ್ವಚ್ಛವಾಗಿ ಮಾತನಾಡಬೇಕು ಮತ್ತು ಕನ್ನಡವನ್ನು ಅರ್ಥಮಾಡಿಕೊಳ್ಳಬೇಕು.
3) ಕಂಪ್ಯೂಟರ್ ಆಪರೇಷನ್ ಮತ್ತು ಅಪ್ಲಿಕೇಷನ್ ಜ್ಞಾನವಿರಬೇಕು.
ದ್ವಿತೀಯ ದರ್ಜೆ ಸಹಾಯಕರು (Second Division Assistant) 1) ದ್ವಿತೀಯ ಪಿ.ಯು.ಸಿ ಯಲ್ಲಿ ಉತ್ತೀರ್ಣರಾಗಿರಬೇಕು. ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ಕನಿಷ್ಠ ಶೇಕಡ 60% ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಪರಿಶಿಷ್ಟ  ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ಅಭ್ಯರ್ಥಿಗಳಾಗಿದ್ದಲ್ಲಿ ಶೇಕಡ 50% ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
2) ಕನ್ನಡವನ್ನು ಓದುವ ಸಾಮರ್ಥ್ಯದ ಜೊತೆ ಕನ್ನಡದ ಜ್ಞಾನ, ಬರೆಯುವಿಕೆ, ಕನ್ನಡವನ್ನು ಸ್ವಚ್ಛವಾಗಿ ಮಾತನಾಡಬೇಕು ಮತ್ತು ಕನ್ನಡವನ್ನು ಅರ್ಥಮಾಡಿಕೊಳ್ಳಬೇಕು.
3) ಕಂಪ್ಯೂಟರ್ ಆಪರೇಷನ್ ಮತ್ತು ಅಪ್ಲಿಕೇಷನ್ ಜ್ಞಾನವಿರಬೇಕು. 
ಕಿರಿಯ ಸೇವಕರುಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣರಾಗಿದ್ದು, ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು. 
ವಾಹನ ಚಾಲಕ (Vehicle Driver)1) ಎಸ್.ಎಸ್.ಎಲ್.ಸಿ. ಯಲ್ಲಿ ಉತ್ತೀರ್ಣರಾಗಿದ್ದು, ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು. 
2) ಕಾನೂನುಬದ್ಧ ಡ್ರೈವಿಂಗ್ ಲೈಸೆನ್ಸ್

ವಯೋಮಿತಿ :

ಕನಿಷ್ಠ 18 ವರ್ಷ. ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಎಸ್ಸಿ ಎಸ್ಟಿ, ಪ್ರವರ್ಗ 1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ 40 ವರ್ಷ, ಇತರ ಹಿಂದುಳಿದ ವರ್ಗಕ್ಕೆ ಗರಿಷ್ಠ 38 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಇತರೆ ಅಭ್ಯರ್ಥಿಗಳಿಗೆ 35 ವರ್ಷ ವಯೋಮಿತಿ ಹೊಂದಿರತಕ್ಕದ್ದು. ಮಾಜಿ ಸೈನಿಕ ಅಭ್ಯರ್ಥಿಗೆ ಸರ್ಕಾರದ ಆದೇಶಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ದೈಹಿಕ ಅಂಗವಿಕಲ ಹಾಗೂ ವಿಧವೆ ಮಹಿಳಾ ಅಭ್ಯರ್ಥಿಗೆ 10 ವರ್ಷ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ:

  • ಸಾಮಾನ್ಯ ವರ್ಗ, ಹಿಂದುಳಿದ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ 1000 ರೂ. + ರೂ.40 (ಅಂಚೆ ಶುಲ್ಕ)
  • ಎಸ್ಸಿ, ಎಸ್ಟಿ, ಪ್ರವರ್ಗ 1, ಅಂಗವಿಕಲ, ವಿಧವಾ ಅಭ್ಯರ್ಥಿ ಹಾಗೂ ಮಾಜಿ ಸೈನಿಕರಿಗೆ 500 ರೂ. + ರೂ.40 (ಅಂಚೆ ಶುಲ್ಕ) ಅರ್ಜಿಶುಲ್ಕ ನಿಗದಿಪಡಿಸಿದ್ದು, ಆನ್‌ಲೈನ್ ಮೂಲಕ ಪಾವತಿಸಲು ಸೂಚಿಸಲಾಗಿದೆ.

Ballari DCC Bank Recruitment 2022 ಯ ಪ್ರಮುಖ ದಿನಾಂಕಗಳು

ಆನ್‌ಲೈನ್‌ ಅರ್ಜಿ ಸ್ವೀಕರಿಸುವ ಪ್ರಾರಂಭ ದಿನಾಂಕ25.03.2022
ಆನ್‌ಲೈನ್‌ ಅರ್ಜಿ ಸ್ವೀಕರಿಸುವ ಕೊನೆ ದಿನಾಂಕ16-04-2022

Ballari DCC Bank Recruitment 2022 ಪ್ರಮುಖ ಲಿಂಕ್’ಗಳು

EventsLinks
ಆಫಿಸಿಯಲ್ ನೋಟಿಫಿಕೇಶನ್Download
ಆನ್ ಲೈನ್ ಅಪ್ಲಿಕೇಶನ್ಇಲ್ಲಿ ಕ್ಲಿಕ್ ಮಾಡಿ
ಮಾಹಿತಿಲೋಕ ಹೋಮ್ ಪೆಜ್ಇಲ್ಲಿ ಕ್ಲಿಕ್ ಮಾಡಿ
Ballari DCC Bank Recruitment 2022

ಇದೇ ರೀತಿಯ ಉದ್ಯೋಗ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಮ್ ಚಾನೆಲಗೆ Join ಆಗಿ. Join Telegram

Leave a Comment